Last updated
Last updated
ಸೋಷಿಯಲ್ ಮೀಡಿಯಾದಲ್ಲಿ ನಿಮಗೆ ಮತ್ತು ಇತರರಿಗೆ ಅಪಾಯಕಾರಿಯಾದ ಬಹಳಷ್ಟು ಕಟ್ಟುಕಥೆಗಳು ಮತ್ತು ಸುಳ್ಳು ಸುದ್ದಿಗಳಿವೆ. ನೀವೇ ಪರಿಶೀಲಿಸದ ಅಥವಾ ಅಧಿಕೃತ ಮೂಲಗಳಿಂದಲ್ಲದ ಯಾವುದೇ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ, ಅದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ.
COVID-19 ಬಗೆಗಿನ ಸಾಮಾನ್ಯ ಕಟ್ಟುಕಥೆಗಳು ಮತ್ತು ಸುಳ್ಳು ಸುದ್ದಿಗಳ ಪಟ್ಟಿಯನ್ನು ನಾವು ಇಲ್ಲಿ ಸಂಗ್ರಹಿಸಿದ್ದೇವೆ. ಅದನ್ನು ಖಾತರಿಪಡಿಸುವ ಲೇಖನದ ಮೂಲವನ್ನೂ ನಾವು ಲಿಂಕ್ ಮಾಡಿದ್ದೇವೆ.
ಕಾರ್ಯ ಪ್ರಗತಿಯಲ್ಲಿದೆ, ಈ ಮಧ್ಯೆ ಇಲ್ಲಿ ನೋಡಿ :
ಇಲ್ಲ. ನೀರು ಕುಡಿಯುವುದು(ಬಿಸಿ ನೀರು) ಮತ್ತು ನಿಮ್ಮ ಗಂಟಲನ್ನು ತೇವವಾಗಿರಿಸುವುದು ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಂದೇಶಗಳನ್ನು ಹರಡಿದೆ. ಸಂದೇಶಗಳು ವಿವಿಧ ಆರೋಗ್ಯ ಸಂಸ್ಥೆಗಳನ್ನು ಉಲ್ಲೇಖಿಸುತ್ತವೆ. ಇವೆಲ್ಲ ಸುಳ್ಳು.
ಕರೋನಾ ವೈರಸ್ ಸೋಂಕನ್ನು ತಡೆಗಟ್ಟಲು (ಬಿಸಿ ಅಥವಾ ತಣ್ಣನೆಯ) ನೀರು ಕುಡಿಯುವುದು ಸಹಾಯ ಮಾಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ಮೂಲ:
ಇಲ್ಲ, COVID-19 ವಾಯುಗಾಮಿ ಅಲ್ಲ, ಅಂದರೆ ಅದು ಗಾಳಿಯ ಮೂಲಕ ಹರಡುವುದಿಲ್ಲ. ಸೋಂಕಿಗೆ ಒಳಗಾದ ಜನರ ಮೂಗು ಮತ್ತು ಬಾಯಿಯಿಂದ ವೈರಸ್ ಹೊಂದಿರುವ ಹನಿಗಳ ಸಂಪರ್ಕದ ಮೂಲಕ ಇದು ಹರಡುತ್ತದೆ.
ವೈರಸ್ ವಾಯುಗಾಮಿ ಅಲ್ಲದಿದ್ದರೂ ಸಹ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿರುವುದರಿಂದ ಸಾಕಷ್ಟು ಅಪಾಯವಿದೆ. ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಕೆಳಗೆ ನೀಡಿರುವ ಸೂಚನೆಗಳನ್ನು ಅನುಸರಿಸಿ.
Source :
COVID-19 ಬಗೆಗಿನ ಸುಳ್ಳು ಸುದ್ದಿಗಳನ್ನು ಪಟ್ಟಿ ಮಾಡುತ್ತದೆ