ಮುನ್ನೆಚ್ಚರಿಕೆಗಳು ಮತ್ತು ತಡೆಗಟ್ಟುವ ಕ್ರಮಗಳು
COVID-19 ಹರಡುವುದನ್ನು ತಡೆಗಟ್ಟಲು ಅಗತ್ಯವಾದ ಕ್ರಮಗಳನ್ನು ವಿವರಿಸುತ್ತದೆ
COVID-19 ತುಂಬಾ ಸಾಂಕ್ರಾಮಿಕವಾಗಿದ್ದರೂ ಸಹಾ, ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ನೀವು ಸೋಂಕಿಗೆ ಒಳಗಾಗುವುದನ್ನು ತಡೆಯಬಹುದು.
ವ್ಯಕ್ತಿಯು ಸೀನುವಾಗ ಅಥವಾ ಕೆಮ್ಮಿದಾಗ ವೈರಸ್ ಪೀಡಿತ ವ್ಯಕ್ತಿಯ ಮೂಗು ಅಥವಾ ಬಾಯಿನಿಂದ ಸಣ್ಣ ಹನಿಗಳ ಮೂಲಕ ವೈರಸ್ ಹರಡುತ್ತದೆ. ಈ ಹನಿಗಳು ಮೂಲದಿಂದ 1 ಮೀಟರ್‌ಗಿಂತ ಹೆಚ್ಚು ಹಾರಬಲ್ಲದು ಮತ್ತು ವಸ್ತುಗಳ ಮೇಲೆ ಕೂರಬಹುದು. ಇತರರು ಆ ವಸ್ತುವನ್ನು ಸ್ಪರ್ಶಿಸಿ, ನಂತರ ಅವರ ಕಣ್ಣು, ಬಾಯಿ ಅಥವಾ ಮೂಗನ್ನು ಸ್ಪರ್ಶಿಸಿದರೆ ಅವರಿಗೆ ವೈರಸ್ ಹರಡಬಹುದು. ಪೀಡಿತ ವ್ಯಕ್ತಿಯ ನಡುವಿನ ಅಂತರವು ಒಂದು ಮೀಟರ್‌ಗಿಂತ ಕಡಿಮೆಯಿದ್ದಲ್ಲಿ ಈ ಹನಿಗಳನ್ನು ಉಸಿರಾಡುವ ಮೂಲಕವೂ ವೈರಸ್ ಹರಡಬಹುದು.
ತಡೆಗಟ್ಟುವ ಕ್ರಮಗಳು
ವೈರಸ್ ಗಾಳಿಯ ಮೂಲಕ ಹರಡಬಹುದು ಎಂಬುದಕ್ಕೆ ಯಾವುದೇ ರೀತಿಯ ಆದರ ಇಲ್ಲ. ಆದ್ದರಿಂದ, ನಿಮ್ಮನ್ನು ಮತ್ತು ನಿಮ್ಮ ಸುತ್ತಮುತ್ತಲಿನವರನ್ನು ರಕ್ಷಿಸಲು ಈ ಕ್ರಮಗಳನ್ನು ಅನುಸರಿಸಿ.
ನೀವು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಅಥವಾ ಹೃದ್ರೋಗಿಗಳು, ಮಧುಮೇಹಿಗಳು, ಉಸಿರಾಟದ ಕಾಯಿಲೆ ಇರುವವರು, ಅಧಿಕ ರಕ್ತದೊತ್ತಡ ಅಥವಾ ಯಾವುದೇ ಗಂಭೀರ ಕಾಯಿಲೆ ಇದಾವರದಲ್ಲಿ, ನೀವು ಇಲ್ಲಿ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯುವುದು
ವೈರಸ್ ಮುಖ್ಯವಾಗಿ ನಿಮ್ಮ ಕೈಗಳ ಮೂಲಕ ಹರಡುವುದರಿಂದ, ನೀವು ಅವುಗಳನ್ನು ಆಗಾಗ್ಗೆ ಚೆನ್ನಾಗಿ ತೊಳೆಯಬೇಕು. ಲಭ್ಯವಿರುವಾಗ ಸಾಬೂನು ಮತ್ತು ನೀರನ್ನು ಬಳಸಲು ಶಿಫಾರಸು ಮಾಡಲಾಗಿದೆ, ಇಲ್ಲದಿದ್ದರೆ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಸಾಕಷ್ಟು ಪ್ರಮಾಣದ ಆಲ್ಕೋಹಾಲ್ ಹೊಂದಿರುವ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ಬಳಸಿ.
ಕನಿಷ್ಠ 20 ಸೆಕೆಂಡುಗಳ ಕಾಲ ಸೋಪ್ ಮತ್ತು ನೀರಿನಿಂದ ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್ ಮೂಲಕ ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಿರಿ.
ನಿಮ್ಮ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟುವುದನ್ನು ನಿಯಂತ್ರಿಸಿ
ವೈರಸ್ ಯಾವುದೇ ಸಮಯದಲ್ಲಿ ನಿಮ್ಮ ಚರ್ಮದೊಂದಿಗೆ ಸಂಪರ್ಕಕ್ಕೆ ಬರಬಹುದು, ವಿಶೇಷವಾಗಿ ನಿಮ್ಮ ಕೈಗಳು. ಕಲುಷಿತ ಚರ್ಮವು ನಿಮ್ಮ ಕಣ್ಣುಗಳು, ಮೂಗು ಅಥವಾ ಬಾಯಿಯನ್ನು ಮುಟ್ಟಿದರೆ ವೈರಸ್ ಅನ್ನು ನಿಮ್ಮ ದೇಹಕ್ಕೆ ವರ್ಗಾಯಿಸಿ, ನಿಮಗೆ ಸೋಂಕು ಉಂಟುಮಾಡಬಹುದು.
ಕೈ ತೊಳೆಯದೆ ನಿಮ್ಮ ಮುಖವನ್ನು ಮುಟ್ಟಬೇಡಿ
ದೂರ ಕಾಪಾಡಿಕೊಳ್ಳಿ
ನಿಮ್ಮ ಸ್ಥಳೀಯ ಸಮುದಾಯದಲ್ಲಿ ವೈರಸ್ ಹರಡುವಿಕೆಯ ಮಟ್ಟವನ್ನು ಅವಲಂಬಿಸಿ, ಕೆಮ್ಮು ಅಥವಾ ಸೀನುವ ಯಾರಿಂದಾದರೂ ಕನಿಷ್ಠ 1 ಮೀಟರ್ (> 3 ಅಡಿ) ದೂರಇರಲು ಸೂಚಿಸಲಾಗುತ್ತದೆ. ವ್ಯಕ್ತಿಯು ಸೀನುವಾಗ ಅಥವಾ ಕೆಮ್ಮುವಾಗ ನೀವು ಸಮೀಪದಲ್ಲಿದ್ದರೆ ಅವರಿಂದ ಸಣ್ಣ ಹನಿಗಳು ಹೊರಬಂದು, ಅದರಿಂದ ನೀವು ಸೋಂಕಿಗೆ ಒಳಗಾಗಬಹುದು.
ಸೀನುವಾಗ ಅಥವಾ ಕೆಮ್ಮುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ
ನೀವು ಕೆಮ್ಮುತ್ತಿದ್ದರೆ ಅಥವಾ ಸೀನುತ್ತಿದ್ದರೆ ನಿಮ್ಮ ಮುಖವನ್ನು ಬಾಗಿದ ಮೊಣಕೈ ಅಥವಾ ಕೆರ್ಚೀಫ್‌ನಿಂದ ಮುಚ್ಚಿಕೊಳ್ಳಿ. ಫ್ಲೂ, ಕೋಲ್ಡ್ ಅಥವಾ COVID-19 ನಂತಹ ಹರಡುವ ವೈರಸ್‌ಗಳನ್ನು ತಡೆಯಲು ಇದು ಸಹಾಯ ಮಾಡುತ್ತದೆ.
ನೀವು ಸೋಂಕಿಗೆ ಒಳಗಾಗಿದ್ದೀರಿ ಎಂದು ನೀವು ಭಾವಿಸಿದರೆ, ನಿಮ್ಮ ಸುರಕ್ಷತೆ ಮತ್ತು ಇತರರ ಸುರಕ್ಷತೆಗಾಗಿ ಈ ವಿಶೇಷ ಸೂಚನೆಗಳನ್ನು ಅನುಸರಿಸಿ.
Last updated